ಹಲ್ಮಿಡಿ ಶಾಸನ (ಕ್ರಿ.ಶ. ೪೫೦)
ಇದು ಕನ್ನಡದ ಮೊದಲ ಲಭ್ಯ ಶಾಸನ ಎಂದು ಪ್ರಸಿದ್ಧವಾಗಿದೆ.
ಸ್ಥಳ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಎಂಬ ಗ್ರಾಮದಲ್ಲಿ ದೊರೆಯಿತು.
ದೊರೆ: ಕದಂಬ ವಂಶದ ರಾಜ ಕಾಕುಸ್ಥವರ್ಮನ ಕಾಲಕ್ಕೆ ಸೇರಿದ್ದೆಂದು ನಂಬಲಾಗಿದೆ.
ವಿಶೇಷತೆ: ಇದು ಪೂರ್ವದ ಹಳಗನ್ನಡ ಲಿಪಿಯಲ್ಲಿದೆ. ಇದು ವಿಜಯಾರಸ ಎಂಬುವವನು ಯುದ್ಧದಲ್ಲಿ ಗೆದ್ದಿದ್ದಕ್ಕಾಗಿ ನೀಡಿದ ಭೂದಾನದ ಬಗ್ಗೆ ತಿಳಿಸುತ್ತದೆ. ಇದರಲ್ಲಿ ಸಂಸ್ಕೃತದ ಪ್ರಭಾವ ಹೆಚ್ಚಿದ್ದರೂ, ಕನ್ನಡದ ಪ್ರತ್ಯಯಗಳ ಬಳಕೆ ಸ್ಪಷ್ಟವಾಗಿದೆ.
ಬಾದಾಮಿ ಶಾಸನ (ಕ್ರಿ.ಶ. ೭೦೦)
ಇದನ್ನು ಕಪ್ಪೆ ಅರಭಟ್ಟನ ಶಾಸನ ಎಂದೂ ಕರೆಯುತ್ತಾರೆ.
ಸ್ಥಳ: ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಗುಡ್ಡದ ಮೇಲಿದೆ.
ವಿಶೇಷತೆ: ಈ ಶಾಸನವು ಕನ್ನಡ ಸಾಹಿತ್ಯದ ಪ್ರಮುಖ ಛಂದಸ್ಸಾದ 'ತ್ರಿಪದಿ'ಯ ಮೊದಲ ಉದಾಹರಣೆಯನ್ನು ಒಳಗೊಂಡಿದೆ.
ಪ್ರಸಿದ್ಧ ಸಾಲು: "ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ..." ಎಂಬ ಪದ್ಯವು ಈ ಶಾಸನದಲ್ಲಿದೆ, ಇದು ಕನ್ನಡಿಗರ ಗುಣವನ್ನು ವರ್ಣಿಸುತ್ತದೆ.
ತಾಳಗುಂದ ಶಾಸನ
ಸ್ಥಳ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ.
ವಿಶೇಷತೆ: ಇದು ಕದಂಬರ ಇತಿಹಾಸವನ್ನು ತಿಳಿಸುವ ಪ್ರಮುಖ ದಾಖಲೆ. ಇದು ಕನ್ನಡದ ಮೊದಲ ಸಂಸ್ಕೃತ ಶಾಸನಗಳಲ್ಲಿ ಒಂದಾದರೂ, ಕನ್ನಡದ ಅಕ್ಷರಗಳ ಬೆಳವಣಿಗೆಯನ್ನು ತಿಳಿಯಲು ಸಹಕಾರಿ.
ಶ್ರವಣಬೆಳಗೊಳದ ಶಾಸನಗಳು (ಚಾವುಂಡರಾಯನ ಶಾಸನ)
ಸ್ಥಳ: ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಪಾದದ ಬಳಿ ಇದೆ.
ವಿಶೇಷತೆ: "ಶ್ರೀ ಚಾವುಂಡರಾಯ ಮಾಡಿಸಿದಂ" ಎಂಬ ವಾಕ್ಯವು ಇಲ್ಲಿದೆ. ಇದು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮರಾಠಿ ಭಾಷೆಗಳಲ್ಲಿಯೂ ಕೆತ್ತಲ್ಪಟ್ಟಿದೆ.
ಅತ್ತಿಮಬ್ಬೆಯ ಲಕ್ಕುಂಡಿ ಶಾಸನ
ಸ್ಥಳ: ಗದಗ ಜಿಲ್ಲೆಯ ಲಕ್ಕುಂಡಿ.
ವಿಶೇಷತೆ: ದಾನಚಿಂತಾಮಣಿ ಅತ್ತಿಮಬ್ಬೆಯು ಬ್ರಹ್ಮಜಿನಾಲಯವನ್ನು ಕಟ್ಟಿಸಿದ ಬಗ್ಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಅವಳು ನೀಡಿದ ಕೊಡುಗೆಯ ಬಗ್ಗೆ ಈ ಶಾಸನವು ವಿವರಿಸುತ್ತದೆ.
ಕನ್ನಡ ಶಾಸನಗಳ ಪ್ರಾಮುಖ್ಯತೆ:
ಲಿಪಿ ವಿಕಾಸ: ಬ್ರಾಹ್ಮಿ ಲಿಪಿಯಿಂದ ಇಂದಿನ ಕನ್ನಡ ಲಿಪಿಯವರೆಗಿನ ಬದಲಾವಣೆಯನ್ನು ಗುರುತಿಸಬಹುದು.
ಇತಿಹಾಸ: ರಾಜಮನೆತನಗಳ ಏರಿಳಿತ, ಯುದ್ಧಗಳು ಮತ್ತು ದಾನಧರ್ಮಗಳ ಬಗ್ಗೆ ಮಾಹಿತಿ ನೀಡುತ್ತವೆ.
ಸಾಹಿತ್ಯ: ಕಾವ್ಯ ರೂಪದ ಶಾಸನಗಳು (ಉದಾಹರಣೆಗೆ ಪಂಪನ ಕಾಲದ ಶಾಸನಗಳು) ಅಂದಿನ ಸಾಹಿತ್ಯಿಕ ಪ್ರೌಢಿಮೆಯನ್ನು ತೋರಿಸುತ್ತವೆ.
ಸಂಸ್ಕೃತಿ: ಹಳೆಯ ಕಾಲದ ನ್ಯಾಯ ಪದ್ಧತಿ, ಶಿಕ್ಷಣ ಮತ್ತು ಸಮಾಜದ ಬಗ್ಗೆ ಬೆಳಕು ಚೆಲ್ಲುತ್ತವೆ.
ಕನ್ನಡದಲ್ಲಿ ಸುಮಾರು ೩೦,೦೦೦ಕ್ಕೂ ಹೆಚ್ಚು ಶಾಸನಗಳು ಪತ್ತೆಯಾಗಿದ್ದು, ಇವು ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ:
ಗದ್ಯ:
ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ |
ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್ ||
ಶ್ಲೋಕ:
ವರನ್ತೇಜಸ್ವಿನೋ ಮೃತ್ಯುರ್ನತು ಮಾನಾವಖಣ್ಡನಮ್|
ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗನ್ದಿನೇ ದಿನೇ||
ತ್ರಿಪದಿ:
ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ಪೆರನಲ್ಲ ||
ಒಳ್ಳಿತ ಕೆಯ್ವೊರಾರ್ಪೋಲ್ಲದುಮದರನ್ತೆ
ಬಲಿತ್ತು ಕಲಿಗೆ ವಿಪರೀತಾ ಪುರಾಕೃತ
ಮಿಲ್ಲಿ ಸನ್ಧಿಕ್ಕುಮದು ಬಂದು||
ಕಟ್ಟಿದ ಸಿಂಘಮನ್ ಕೆಟ್ಟೊಡೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಮ್ ||
ಇದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಪಾಠ.
ಈ ಶಾಸನದ ಸಾರ ಹೀಗಿದೆ:
ಕಪ್ಪೆ ಅರಭಟ್ಟ ಒಳ್ಳೆಯ ಜನರಿಗೆ ಪ್ರಿಯನಾದವನೂ, ಇನ್ನೊಬ್ಬರಿಗೆ ಕಷ್ಟ ಕೊಡುವ ಜನರನ್ನು ಶಿಕ್ಷಿಸುವ ಕಲಿಯುಗ ವಿಪರೀತನೂ ಆಗಿದ್ದನಂತೆ. ಅಷ್ಟೇ ಅಲ್ಲ, ಆತ ಸಾಧುಜನರಿಗೆ ಸಾಧುವೂ, ಮೃದುವಾದ ಜನರಿಗೆ ಮೃದುವಾದವನೂ, ಇತರರನ್ನು ಬಾಧಿಸುವ ಅಥವಾ ತೊಂದರೆ ಕೊಡುವ ಕಲಿಗೆ (ಪರಾಕ್ರಮಿಗೆ) ಕಲಿಯಗ ವಿಪರೀತನೂ ಆಗಿದ್ದನಂತೆ. ಈತ ಸಾಕ್ಷಾತ್ ವಿಷ್ಣುವಲ್ಲದೆ ಬೇರೇನೂ ಅಲ್ಲವಂತೆ!
ತಿರುಳು.
ಕನ್ನಡದ ಅತ್ಯಂತ ಪ್ರಮುಖ ಶಾಸನಗಳಲ್ಲಿ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವೂ ಒಂದು. ಕಪ್ಪೆ ಅರಭಟ್ಟನ ಶೌರ್ಯ, ಸ್ವಾಭಿಮಾನ ಗುಣಗಳನ್ನು ಹೃದಯಸ್ಪರ್ಶಿಯಾಗಿ ವರ್ಣಿಸುತ್ತ, ಆತನ ದಿವ್ಯ ವ್ಯಕ್ತಿತ್ವವನ್ನು ಕಟ್ಟಿ ಕೊಡುವುದು ಈ ಶಾಸನದ ಮೂಲ ತಿರುಳು ;ಆಶಯ. ಡಾ. ಆರ್. ಸಿ. ಹಿರೇಮಠ ಹಾಗೂ ಡಾ. ಎಂ.ಎA. ಕಲಬುರ್ಗಿಯವರು ಹೇಳುವಂತೆ, ಶಿಷ್ಟರಿಗೆ ಶಿಷ್ಟನಾಗಿ, ಪ್ರಿಯರಿಗೆ ಪ್ರಿಯನಾಗಿ, ಬಾಧಿಸುವ ಕಲಿಗೆ ಮಾಧವ ನಾಗಿರುವ 'ಕಲಿಯುಗವಿಪರೀತ'ನಾದ ಕಪ್ಪೆಅರಭಟ್ಟನ ರುದ್ರ-ಶಿವ ವ್ಯಕ್ತಿತ್ವದ ಚಿತ್ರಣ ಈ ಶಾಸನದ ವಸ್ತು. ಮೊದಲ ಎರಡು ಸಾಲು ಗದ್ಯ, ಮುಂದಿನ ಎರಡು ಸಾಲು ಶ್ಲೋಕ, ಆಮೇಲೆ ಮೂರು ತ್ರಿಪದಿಗಳಿವೆ. ಇವು ಉಪಲಬ್ಧ ಪ್ರಥಮ ತ್ರಿಪದಿಗಳು. ಒಂದರ್ಥದಲ್ಲಿ ಇದು ಪ್ರಶಸ್ತಿ ಶಾಸನ. 'ಕಪ್ಪೆ ಅರಭಟ್ಟ' ಎಂಬುದು ಕುತೂಹಲಕಾರಿ ಹೆಸರು. ಬೇರೆ ಶಾಸನಗಳಲ್ಲಿ ಬರುವ ಕಪ್ಪೆಯರ ಚಾವುಂಡರಾಯ, ಕಪ್ಪೆಯರ ಆಹಾರದಾನ ಮೊದಲಾದವುಗಳ ಹಿನ್ನೆಲೆಯಲ್ಲಿ ಈ ಹೆಸರಿನ ಒಗಟನ್ನು ಬಿಡಿಸಬೇಕಾಗಿದೆ.
ಬಾದಾಮಿಯ ತಟ್ಟಿಕೋಟೆಯ ಬಳಿ ಒಂದು ಬಂಡೆಗಲ್ಲ ಮೇಲೆ ಹಾಗೂ ಬೇರೆ ಕೆಲವು ಸ್ಥಳಗಳಲ್ಲಿ ಕೊರೆದ ಈ ಶಾಸನ ಕಪ್ಪೆ ಆರಭಟ್ಟನೆಂಬ ಮಹಾಪುರುಷನ ವ್ಯಕ್ತಿತ್ವವನ್ನು ಮನೋಜ್ಞವಾಗಿ ಕೈವಾರಿಸುತ್ತದೆ. ಈ ಶಾಸನದಲ್ಲಿ ಬರುವ ಕಪ್ಪೆ ಅರಭಟ್ಟನ ಶೌರ್ಯ, ಸ್ವಾಭಿಮಾನಿಗಳು ಸುಪ್ರಸಿದ್ಧವಾಗಿವೆ. ಇದನ್ನು ಗಮನಿಸಿದರೆ, ಕಪ್ಪೆ ಆರಭಟ್ಟ ಒಬ್ಬ ಪ್ರಸಿದ್ಧ ಐತಿಹಾಸಿಕ ವ್ಯಕ್ತಿಯಾಗಿದ್ದಿರಬೇಕು. ಆದರೆ ಅವನನ್ನು ಕುರಿತ ಹೆಚ್ಚಿನ ವಿವರಗಳು ದೊರೆತಿಲ್ಲ. ಈ ಶಾಸನದ ಕಾಲ ಕ್ರಿ.ಶ.ಸು. ೭ನೇ ಶತಮಾನ. ಈ ಶಾಸನಾಕ್ಷರಗಳು ಆ ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ.
ಈ ಶಾಸನದಲ್ಲಿ ಉಕ್ತವಾಗಿರುವ ಮೂರು ತ್ರಿಪದಿಗಳು ಕನ್ನಡದ ಪ್ರಪ್ರಥಮ ಉಪಲಬ್ದ ತ್ರಿಪದಿಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇಲ್ಲಿಯ ತ್ರಿಪದಿಯ ಸಹಜ ಸಿದ್ಧಶೈಲಿಯನ್ನು ನೋಡಿದರೆ, ಈ ಶಾಸನದ ಕಾಲಕ್ಕಿಂತ ಹಿಂದಿನಿAದಲೂ ತ್ರಿಪದಿಗಳು ಬಳಕೆಯಲ್ಲಿದ್ದಿರಬೇಕೆಂದು ತೋರುತ್ತದೆ. ಆದರೆ ಸಿಕ್ಕಿರುವ ತ್ರಿಪದಿಗಳಲ್ಲಿ ಇವೇ ಮೊದಲನೆಯವು ಎಂಬುದು ಗಮನಿಸಬೇಕಾದ ಸಂಗತಿ. ಪೂರ್ವದ ಹಳಗನ್ನಡ ಹಳಗನ್ನಡಕ್ಕೆ ತಿರುಗುತ್ತಿರುವುದನ್ನು ಈ ಶಾಸನದಲ್ಲಿ ಕಾಣಬಹುದು.
ಎರಡು ಅಂಕದ ಪ್ರಶ್ನೋತ್ತರಗಳು:
ಪ್ರ ೧. ಬಾದಾಮಿಯ ಸುಪ್ರಸಿದ್ಧ ಶಾಸನ ಯಾವುದು?
ಉತ್ತರ : ಬಾದಾಮಿಯ ಸುಪ್ರಸಿದ್ಧ ಶಾಸನ ಕಪ್ಪೆ ಅರಭಟ್ಟನ ಶಾಸನ. ಈ ಶಾಸನ ಕಪ್ಪೆ ಅರಭಟ್ಟನೆಂಬ ಮಹಾಪುರುಷನ ವ್ಯಕ್ತಿತ್ವವನ್ನು ತುಂಬಾ ಮನೋಜ್ಞವಾಗಿ ಕಟ್ಟಿಕೊಡುತ್ತದೆ.
ಪ್ರ ೨. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ತಿರುಳೇನು?
ಉತ್ತರ : ಅರಭಟ್ಟನ ಶೌರ್ಯ, ಸ್ವಾಭಿಮಾನ ಗುಣಗಳನ್ನು ಮನೋಜ್ಞವಾಗಿ ವರ್ಣಿಸುವುದು ಈ ಶಾಸನದ ತಿರುಳು. ಅರಭಟ್ಟನ ವ್ಯಕ್ತಿತ್ವ ಇಲ್ಲಿ ತುಂಬಾ ಹೃದಯಸ್ಪರ್ಶಿಯಾಗಿದೆ.
ಪ್ರ ೩. ಕಪ್ಪೆ ಅರಭಟ್ಟ ಶಾಸನದ ಕಾಲ ಯಾವುದು? ಹಾಗೂ ಈ ಶಾಸನವನ್ನು ಎಲ್ಲೆಲ್ಲಿ ಕೊರೆಯಲಾಗಿದೆ?
ಉತ್ತರ : ಕಪ್ಪೆ ಅರಭಟ್ಟ ಶಾಸನದ ಕಾಲ ಕ್ರಿ. ಶ. ಸು. ೭ನೆಯ ಶತಮಾನ. ಈ ಶಾಸನವನ್ನು ಬಾದಾಮಿಯ ತಟ್ಟಿಕೋಟೆಯ ಬಳಿ ಒಂದು ಬಂಡೆಗಲ್ಲ ಮೇಲೆ ಹಾಗೂ ಬೇರೆ ಕೆಲವು ಸ್ಥಳಗಳಲ್ಲಿ ಕೊರೆಯಲಾಗಿದೆ.
ಪ್ರ ೪. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಯಾವ ಮಾದರಿಯಲ್ಲಿದೆ?
ಉತ್ತರ : ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಮೊದಲ ಎರಡು ಸಾಲು ಗದ್ಯ, ಮುಂದಿನ ಎರಡು ಸಾಲು ಶ್ಲೋಕ, ಆಮೇಲೆ ಮೂರು ತ್ರಿಪದಿಗಳಿಂದ ಕೂಡಿದ ಮಾದರಿಯಲ್ಲಿದೆ.
ಪ್ರ ೫. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಯಾವ ಶೈಲಿಯಲ್ಲಿದೆ?
ಉತ್ತರ : ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಹಳಗನ್ನಡ ಶೈಲಿಯಲ್ಲಿದೆ. ೭ ನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ರಚಿತವಾಗಿರುವ ಈ ಶಾಸನ ಪೂರ್ವದ ಹಳಗನ್ನಡ ನಡುಗನ್ನಡಕ್ಕೆ ಪರಿವರ್ತನೆಗೊಳ್ಳುವುದರ ಪ್ರಯೋಗವಾಗಿದೆ.
ಪ್ರ ೬. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ವಸ್ತುವೇನು?
ಉತ್ತರ : ಕಪ್ಪೆಅರಭಟ್ಟನ ರುದ್ರ-ಶಿವ ವ್ಯಕ್ತಿತ್ವದ ಚಿತ್ರಣ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ವಸ್ತು. ಅಲ್ಲದೆ, ಈ ಶಾಸನ ಕಪ್ಪೆ ಅರಭಟ್ಟನನ್ನು ಸಾಕ್ಷಾತ್ ವಿಷ್ಣುವಿಗೂ ಹೋಲಿಸಿದೆ.
ಪ್ರ ೭. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಯಾವ ಪ್ರಕಾರದ್ದು?
ಉತ್ತರ : ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಒಂದರ್ಥದಲ್ಲಿ ಪ್ರಶಸ್ತಿಶಾಸನವಾಗಿದೆ. ಇಲ್ಲಿ ಅರಭಟ್ಟನ ಶೌರ್ಯ, ಸ್ವಾಭಿಮಾನಿಗಳನ್ನು ಹೃದಯಸ್ಪರ್ಶಿಯಾಗಿ ಸ್ತುತಿಸಲಾಗಿದೆ.
ಪ್ರ ೮. ಕಪ್ಪೆ ಅರಭಟ್ಟನ ವಿಷಯ ತಿಳಿಸಿ.
ಉತ್ತರ : ಕಪ್ಪೆ ಅರಭಟ್ಟನ ವ್ಯಕ್ತಿತ್ವದ ವರ್ಣನೆಯನ್ನು ಗಮನಿಸಿದರೆ, ಆತನೊಬ್ಬ ಸುಪ್ರಸಿದ್ಧ ಐತಿಹಾಸಿಕ ವ್ಯಕ್ತಿಯಾಗಿರಬೇಕೆಂದು ತೋರುತ್ತದೆ. ಆದರೆ ಅವನನ್ನು ಕುರಿತ ಹೆಚ್ಚಿನ ವಿವರಗಳು ದೊರೆತಿಲ್ಲ.
ಪ್ರ ೯. ಕುತೂಹಲಕಾರಿ ಹೆಸರು ಯಾವುದು?
ಉತ್ತರ : 'ಕಪ್ಪೆ ಅರಭಟ್ಟ' ಎಂಬುದು ಕುತೂಹಲಕಾರಿ ಹೆಸರಾಗಿದೆ. ಬೇರೆ ಶಾಸನಗಳಲ್ಲಿ ಬರುವ ಕಪ್ಪೆಯರ ಚಾವುಂಡರಾಯ, ಕಪ್ಪೆಯರ ಆಹಾರದಾನ ಮೊದಲಾದವುಗಳ ಹಿನ್ನೆಲೆಯಲ್ಲಿ ಈ ಹೆಸರಿನ ಒಗಟನ್ನು ಬಿಡಿಸಬೇಕಾಗಿದೆ.
ಪ್ರ ೧೦. ಛಂದಸ್ಸಿನ ದೃಷ್ಟಿಯಿಂದ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ವೈಶಿಷ್ಟ್ಯವೇನು?
ಉತ್ತರ : ಛಂದಸ್ಸಿನ ದೃಷ್ಟಿಯಿಂದ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ವೈಶಿಷ್ಟ್ಯ ತುಂಬಾ ಮಹತ್ವಪೂರ್ಣವಾದದ್ದಾಗಿದೆ. ಏಕೆಂದರೆ, ಈ ಶಾಸನದಲ್ಲಿ ಪ್ರಪ್ರಥಮವಾಗಿ ಕನ್ನಡದ ಮೂರು ತ್ರಿಪದಿಗಳು ಉಪಲಬ್ಧವಾಗಿವೆ.
ಐದು ಅಂಕದ ಪ್ರಶ್ನೋತ್ತರಗಳು:
ಪ್ರ ೧. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಕುರಿತು ವಿವರಿಸಿ.
ಉತ್ತರ : ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ಆರಭಟ್ಟನೆಂಬ ಮಹಾಪುರುಷನ ಭವ್ಯ ವ್ಯಕ್ತಿತ್ವವನ್ನು ಕುರಿತದ್ದು. ಅರಭಟ್ಟನ ಶೌರ್ಯ, ಸ್ವಾಭಿಮಾನಿಗಳು ಸುಪ್ರಸಿದ್ಧವಾಗಿವೆ. ಕಪ್ಪೆ ಅರಭಟ್ಟ ಒಳ್ಳೆಯ ಜನರಿಗೆ ಪ್ರಿಯನಾದವನೂ, ಇನ್ನೊಬ್ಬರಿಗೆ ಕಷ್ಟ ಕೊಡುವ ಜನರನ್ನು ಶಿಕ್ಷಿಸುವ ಕಲಿಯುಗ ವಿಪರೀತನೂ ಆಗಿದ್ದನಂತೆ. ಅಷ್ಟೇ ಅಲ್ಲ, ಆತ ಸಾಧುಜನರಿಗೆ ಸಾಧುವೂ, ಮೃದುವಾದ ಜನರಿಗೆ ಮೃದುವಾದವನೂ, ಇತರರನ್ನು ಬಾಧಿಸುವ ಅಥವಾ ತೊಂದರೆ ಕೊಡುವ ಕಲಿಗೆ (ಪರಾಕ್ರಮಿಗೆ) ಕಲಿಯಗ ವಿಪರೀತನೂ ಆಗಿದ್ದನಂತೆ. ಈತ ಸಾಕ್ಷಾತ್ ವಿಷ್ಣುವಲ್ಲದೆ ಬೇರೆ ಅಲ್ಲವಂತೆ! ಡಾ. ಆರ್. ಸಿ. ಹಿರೇಮಠ ಹಾಗೂ ಡಾ. ಎಂ.ಎA. ಕಲಬುರ್ಗಿಯವರು ಹೇಳುವಂತೆ, ಶಿಷ್ಟರಿಗೆ ಶಿಷ್ಟನಾಗಿ, ಪ್ರಿಯರಿಗೆ ಪ್ರಿಯನಾಗಿ, ಬಾಧಿಸುವ ಕಲಿಗೆ ಮಾಧವನಾಗಿರುವ 'ಕಲಿಯುಗವಿಪರೀತ'ನಾದ ಕಪ್ಪೆಅರಭಟ್ಟನ ರುದ್ರ-ಶಿವ ವ್ಯಕ್ತಿತ್ವದ ಚಿತ್ರಣ ಈ ಶಾಸನದ ವಸ್ತು. ಮೊದಲ ಎರಡು ಸಾಲು ಗದ್ಯ, ಮುಂದಿನ ಎರಡು ಸಾಲು ಶ್ಲೋಕ, ಆಮೇಲೆ ಮೂರು ತ್ರಿಪದಿಗಳಿವೆ. ಇವು ಉಪಲಬ್ಧ ಪ್ರಥಮ ತ್ರಿಪದಿಗಳು. ಒಂದರ್ಥದಲ್ಲಿ ಇದು ಪ್ರಶಸ್ತಿ ಶಾಸನ. 'ಕಪ್ಪೆ ಅರಭಟ್ಟ' ಎಂಬುದು ಕುತೂಹಲಕಾರಿ ಹೆಸರು. ಬೇರೆ ಶಾಸನಗಳಲ್ಲಿ ಬರುವ ಕಪ್ಪೆಯರ ಚಾವುಂಡರಾಯ, ಕಪ್ಪೆಯರ ಆಹಾರದಾನ ಮೊದಲಾದವುಗಳ ಹಿನ್ನೆಲೆಯಲ್ಲಿ ಈ ಹೆಸರಿನ ಒಗಟನ್ನು ಬಿಡಿಸಬೇಕಾಗಿದೆ.
ಹತ್ತು ಅಂಕದ ಪ್ರಶ್ನೋತ್ತರಗಳು:
ಪ್ರ ೧. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಸ್ವಾರಸ್ಯವನ್ನು ನಿರೂಪಿಸಿ.
ಅಥವಾ
ಪ್ರ ೨. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ವೈಶಿಷ್ಟ್ಯವನ್ನು ಕುರಿತು ವಿವೇಚಿಸಿ.
ಅಥವಾ
ಪ್ರ ೩. ಬಾದಾಮಿಯ ಕಪ್ಪೆ ಅರಭಟ್ಟನ ಶೌರ್ಯ, ಅಭಿಮಾನಗಳ
ವ್ಯಕ್ತಿತ್ವವನ್ನು ಚಿತ್ರಿಸಿ.
ಉತ್ತರ : ಕನ್ನಡದ ಅತ್ಯಂತ ಪ್ರಮುಖ ಶಾಸನಗಳಲ್ಲಿ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವೂ ಒಂದು. ಕಪ್ಪೆ ಅರಭಟ್ಟನ ಶೌರ್ಯ, ಸ್ವಾಭಿಮಾನ ಗುಣಗಳನ್ನು ಹೃದಯಸ್ಪರ್ಶಿಯಾಗಿ ವರ್ಣಿಸುತ್ತ, ಆತನ ದಿವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುವುದು ಈ ಶಾಸನದ ಮೂಲ ತಿರುಳು ;ಆಶಯ. ಅರಭಟ್ಟ ಒಳ್ಳೆಯ ಜನರಿಗೆ ಪ್ರಿಯನಾದವನೂ, ಇನ್ನೊಬ್ಬರಿಗೆ ಕಷ್ಟ ಕೊಡುವ ಜನರನ್ನು ಶಿಕ್ಷಿಸುವ ಕಲಿಯುಗ ವಿಪರೀತನೂ ಆಗಿದ್ದನಂತೆ. ಅಷ್ಟೇ ಅಲ್ಲ, ಆತ ಸಾಧುಜನರಿಗೆ ಸಾಧುವೂ, ಮೃದುವಾದ ಜನರಿಗೆ ಮೃದುವಾದವನೂ, ಇತರರನ್ನು ಬಾಧಿಸುವ ಅಥವಾ ತೊಂದರೆ ಕೊಡುವ ಕಲಿಗೆ (ಪರಾಕ್ರಮಿಗೆ) ಕಲಿಯಗ ವಿಪರೀತನೂ ಆಗಿದ್ದನಂತೆ. ಈತ ಸಾಕ್ಷಾತ್ ವಿಷ್ಣುವಲ್ಲದೆ ಬೇರೆ ಅಲ್ಲವಂತೆ! ಡಾ. ಆರ್. ಸಿ. ಹಿರೇಮಠ ಹಾಗೂ ಡಾ. ಎಂ.ಎA. ಕಲಬುರ್ಗಿಯವರು ಹೇಳುವಂತೆ, ಶಿಷ್ಟರಿಗೆ ಶಿಷ್ಟನಾಗಿ, ಪ್ರಿಯರಿಗೆ ಪ್ರಿಯನಾಗಿ, ಬಾಧಿಸುವ ಕಲಿಗೆ ಮಾಧವ ನಾಗಿರುವ 'ಕಲಿಯುಗವಿಪರೀತ'ನಾದ ಕಪ್ಪೆಅರಭಟ್ಟನ ರುದ್ರ-ಶಿವ ವ್ಯಕ್ತಿತ್ವದ ಚಿತ್ರಣ ಈ ಶಾಸನದ ವಸ್ತು. ಮೊದಲ ಎರಡು ಸಾಲು ಗದ್ಯ, ಮುಂದಿನ ಎರಡು ಸಾಲು ಶ್ಲೋಕ, ಆಮೇಲೆ ಮೂರು ತ್ರಿಪದಿಗಳಿವೆ. ಇವು ಉಪಲಬ್ಧ ಪ್ರಥಮ ತ್ರಿಪದಿಗಳು. ಒಂದರ್ಥದಲ್ಲಿ ಇದು ಪ್ರಶಸ್ತಿ ಶಾಸನ. 'ಕಪ್ಪೆ ಅರಭಟ್ಟ' ಎಂಬುದು ಕುತೂಹಲಕಾರಿ ಹೆಸರು. ಬೇರೆ ಶಾಸನಗಳಲ್ಲಿ ಬರುವ ಕಪ್ಪೆಯರ ಚಾವುಂಡರಾಯ, ಕಪ್ಪೆಯರ ಆಹಾರದಾನ ಮೊದಲಾದವುಗಳ ಹಿನ್ನೆಲೆಯಲ್ಲಿ ಈ ಹೆಸರಿನ ಒಗಟನ್ನು ಬಿಡಿಸಬೇಕಾಗಿದೆ.
ಬಾದಾಮಿಯ ತಟ್ಟಿಕೋಟೆಯ ಬಳಿ ಒಂದು ಬಂಡೆಗಲ್ಲ ಮೇಲೆ ಹಾಗೂ ಬೇರೆ ಕೆಲವು ಸ್ಥಳಗಳಲ್ಲಿ ಕೊರೆದ ಈ ಶಾಸನ ಕಪ್ಪೆ ಆರಭಟ್ಟನೆಂಬ ಮಹಾಪುರುಷನ ವ್ಯಕ್ತಿತ್ವವನ್ನು ಮನೋಜ್ಞವಾಗಿ ಕೈವಾರಿಸುತ್ತದೆ. ಈ ಶಾಸನದಲ್ಲಿ ಬರುವ ಕಪ್ಪೆ ಅರಭಟ್ಟನ ಶೌರ್ಯ, ಸ್ವಾಭಿಮಾನಿಗಳು ಸುಪ್ರಸಿದ್ಧವಾಗಿವೆ. ಇದನ್ನು ಗಮನಿಸಿದರೆ, ಕಪ್ಪೆ ಆರಭಟ್ಟ ಒಬ್ಬ ಸುಪ್ರಸಿದ್ಧ ಐತಿಹಾಸಿಕ ವ್ಯಕ್ತಿಯಾಗಿದ್ದಿರಬೇಕು. ಆದರೆ ಅವನನ್ನು ಕುರಿತ ಹೆಚ್ಚಿನ ವಿವರಗಳು ದೊರೆತಿಲ್ಲ. ಈ ಶಾಸನದ ಕಾಲ ಕ್ರಿ.ಶ.ಸು. ೭ನೇ ಶತಮಾನ. ಈ ಶಾಸನಾಕ್ಷರಗಳು ಆ ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ.
ಪ್ರಾರಂಭದ ಗದ್ಯ ಮತ್ತು ಸಂಸ್ಕೃತ ಶ್ಲೋಕವನ್ನು ಬಿಟ್ಟರೆ ಈ ಶಾಸನ ಉಳಿದಂತೆ ತ್ರಿಪದಿಯಲ್ಲಿದೆ. ಈ ಶಾಸನದಲ್ಲಿ ಉಕ್ತವಾಗಿರುವ ಮೂರು ತ್ರಿಪದಿಗಳು ಕನ್ನಡದ ಪ್ರಪ್ರಥಮ ಉಪಲಬ್ದ ತ್ರಿಪದಿಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇಲ್ಲಿಯ ತ್ರಿಪದಿಯ ಸಹಜ ಸಿದ್ಧಶೈಲಿಯನ್ನು ನೋಡಿದರೆ, ಈ ಶಾಸನದ ಕಾಲಕ್ಕಿಂತ ಹಿಂದಿನಿAದಲೂ ತ್ರಿಪದಿಗಳು ಬಳಕೆಯಲ್ಲಿದ್ದಿರಬೇಕೆಂದು ತೋರುತ್ತದೆ. ಆದರೆ ಸಿಕ್ಕಿರುವ ತ್ರಿಪದಿಗಳಲ್ಲಿ ಇವೇ ಮೊದಲನೆಯವು ಎಂಬುದು ಗಮನಿಸಬೇಕಾದ ಸಂಗತಿ. ಪೂರ್ವದ ಹಳಗನ್ನಡ ಹಳಗನ್ನಡಕ್ಕೆ ತಿರುಗುತ್ತಿರುವುದನ್ನು ಈ ಶಾಸನದಲ್ಲಿ ಕಾಣಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ